ಪ್ರಪಂಚದ ವಿವಿಧ ಭಾಗಗಳ ಜನರೂ ಸಂಸ್ಥೆಗಳೂ ಸರ್ಕಾರಗಳೂ ಪರಸ್ಪರವಾಗಿ ಸಂಪರ್ಕವನ್ನು ವೃದ್ಧಿಪಡಿಸಿಕೊಳ್ಳುವುದಕ್ಕೂ ವ್ಯವಹಾರಗಳನ್ನು ಬೆಳೆಸುವುದಕ್ಕೂ ನೆರವಾಗಿರುವ ಸಾಧನಗಳಲ್ಲಿ ಅಂಚೆ ವ್ಯವಸ್ಥೆ (ಪೋಸ್ಟಲ್ ಸಿಸ್ಕಮ್) ಮುಖ್ಯವಾದದ್ದು. ಅಂಚೆ ಇತಿಹಾಸ ಬಹಳ ಪುರಾತನವಾದದ್ದು. ಬಹು ಹಿಂದೆ ಪೂರ್ವದೇಶಗಳಲ್ಲಿ ಪ್ರವರ್ಧಮಾನ ಸ್ಥಿತಿಯಲ್ಲಿದ್ದ ಚಕ್ರಾಧಿಪತ್ಯಗಳ ಕಾಲದಲ್ಲಿಯೂ ಅಂಚೆ ವ್ಯವಸ್ಥೆಯಿದ್ದುದು ತಿಳಿದು ಬಂದಿದೆ. ಆ ಕಾಲದ ಚಕ್ರಾಧಿಪತ್ಯಗಳಿಗೆ ಒಳಪಟ್ಟಿದ್ದ ವಿಶಾಲವಾದ ಭೂ ಪ್ರದೇಶಗಳನ್ನು ಹಿಡಿತದಲ್ಲಿಟ್ಟುಕೊಂಡು ಆಡಳಿತ ನಡೆಸಲು ಈ ವ್ಯವಸ್ಥೆ ಅಗತ್ಯವಾಗಿತ್ತು. ಬಹು ಪುರಾತನವಾದ ಪರ್ಷಿಯ ಚಕ್ರಾಧಿಪತ್ಯದಲ್ಲಿ ಅಂಚೆ ವ್ಯವಸ್ಥೆಯಿತ್ತೆಂಬುದಾಗಿ ಗೊತ್ತಾಗಿದೆ. ಅನಂತರ ಬಂದ ಮೆಸಿಡೋನಿಯನ್ನರೂ ಅಲ್ಪಪ್ರಮಾಣದಲ್ಲಿ ಈ ವ್ಯವಸ್ಥೆಯನ್ನಿಟ್ಟುಕೊಂಡಿದ್ದರು. ರೋಮನ್ ಚಕ್ರಾಧಿಪತ್ಯದ ಕಾಲದಲ್ಲಂತೂ ಈ ವ್ಯವಸ್ಥೆ ಬಹಳ ಸಮರ್ಪಕವಾಗಿತ್ತು. ಈ ಚಕ್ರಾಧಿಪತ್ಯಗಳು ಕ್ಷೀಣಿಸಿ, ಮತ್ತೆ ಅನಾಗರಿಕತೆಯ ಸ್ಥಿತಿ ಬಂದಾಗ ಅಂಚೆಯ ವ್ಯವಸ್ಥೆಯೂ ಅಳಿಸಿಹೋಯಿತು. (ಹೆಚ್ಚಿನ ಮಾಹಿತಿ...)
ಕರ್ನಾಟಕ ಗ್ಯಾಝೆಟಿಯರ್ ಒಂದು ಪ್ರದೇಶದ ಅಥವಾ ಜಿಲ್ಲೆಯ ನಿಖರವಾದ ಸಮಗ್ರವಾದ ಸ್ಥಳೀಯ ಮಾಹಿತಿ ಒದಗಿಸುವ ಆಕರ ಗ್ರಂಥವೇ ಗ್ಯಾಝೆಟಿಯರ್ (ದೇಶ ವಿಷಯಕೋಶ.) ಗ್ಯಾಝೆಟಿಯರ್ ಎಂಬುದು ಆಧುನಿಕ ನಮೂನೆಯ ಮಾಹಿತಿಕೋಶ.
ಗರುಡ (ಹಕ್ಕಿ)ಫಾಲ್ಕನಿ ಫಾರ್ಮೀಸ್ ಗಣದ ಆಕ್ಸಿಪಿಟ್ರಿಡೀ ಕುಟುಂಬದ ಬ್ಯೂಟಿಯಾನಿನೀ ಉಪಕುಟುಂಬಕ್ಕೆ ಸೇರಿದ ಒಂದು ಹಕ್ಕಿ.(ಚಿತ್ರಿತ) ಹದ್ದು, ಗಿಡುಗ, ಡೇಗೆ, ರಣಹದ್ದು, ಗೂಬೆ ಮುಂತಾದವುಗಳ ಹತ್ತಿರ ಸಂಬಂಧಿ. ಹ್ಯಾಲಿಯಾಸ್ಟರ್ ಇಂಡಸ್ ಇದರ ವೈಜ್ಞಾನಿಕನಾಮ.
ದಿ ಗಾರ್ಡಿಯನ್ಲಂಡನ್ ಮತ್ತು ಮ್ಯಾಂಚೆಸ್ಟರ್ನಿಂದ ಪ್ರಕಟವಾಗುತ್ತಿರುವ ರಾಷ್ಟ್ರೀಯ ದಿನ ಪತ್ರಿಕೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕೆಲವೇ ಪತ್ರಿಕೆಗಳಲ್ಲಿ ಒಂದು. ಪ್ರಾರಂಭದಲ್ಲಿ ಇದು ಮ್ಯಾಂಚೆಸ್ಟರ್ ಗಾರ್ಡಿಯನ್ ಎಂಬ ಹೆಸರಿನಿಂದ ಸಾಪ್ತಾಹಿಕವಾಗಿ ಪ್ರಕಟವಾಗುತ್ತಿತ್ತು.
ಗೋಷ್ಠಿಗಾನ ಹಲವರು ಒಟ್ಟುಗೂಡಿ ಒಮ್ಮೆಗೇ ಹಾಡಿ ನುಡಿಸುವುದಕ್ಕೆ ಈ ಹೆಸರಿದೆ. ಇಂಥ ಸಮುದಾಯದಲ್ಲಿ ಪ್ರತಿಯೊಬ್ಬರಿಗೂ ಪೂರ್ವ ನಿಶ್ಚಿತ ಧಾತು (ಗೇಯಾಂಶ) ಮತ್ತು ಮಾತುಗಳು ತಿಳಿದಿದ್ದು ಅವನ್ನು ನಿಯತಕಾಲದಲ್ಲಿ ಸ್ವತಂತ್ರವಾಗಿ ಹಾಡಿ ನುಡಿಸುತ್ತಾರೆ
ಆಡಂ ಸ್ಮಿತ್ ಆರ್ಥಿಕ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು ಆಡಂ ಸ್ಮಿತ್; ರಾಜಕೀಯಾರ್ಥಶಾಸ್ತ್ರದ ಪಿತನೆಂದೂ, ಆಂಗ್ಲ ಸಂಪ್ರದಾಯ ಪಂಥದ ಸಂಸ್ಥಾಪಕನೆಂದೂ, ಗೌರವಿಸಲ್ಪಡುತ್ತಾರೆ.
ಅಕ್ಬರನಾಮ ಚಕ್ರವರ್ತಿ ಅಕ್ಬರ್ ನ ಜೀವನವನ್ನು ಚಿತ್ರಿಸುವ ಚಾರಿತ್ರಿಕ ಗ್ರಂಥ.
ಅಕ್ಟೋಬರ್ ೨೯: ಬಿದ್ಯಾ ದೇವಿ ಭಂಡಾರಿ(ಚಿತ್ರಿತ) ನೇಪಾಳದ ಮೊದಲ ಚುನಾಯಿತ ಮಹಿಳಾ ರಾಷ್ಟ್ರಪತಿಯಾಗಿದ್ದಾರೆ.
ಬಿದ್ಯಾ ದೇವಿ ಭಂಡಾರಿ
ಅಕ್ಟೋಬರ್ ೨೮: ಚೀನಾ ದೇಶವು ದಶಕಗಳ ಹಳೆಯ ಒಂದು-ಮಗು ನೀತಿಯನ್ನು ಸಡಿಲಿಸಿದೆ.
ಅಕ್ಟೋಬರ್ ೨೬: ರಿಕ್ಟರ್ ಮಾಪಕದಲ್ಲಿ ೭.೫ ತೀವ್ರತೆಯ ಭೂಕಂಪವು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸಂಭವಿಸಿ, ಸುಮಾರು ೩೮೦ ಮಂದಿ ಮೃತಪಟ್ಟು ೨೪೦೦ಗಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).